Pages

Wednesday, January 8, 2014

Kannada Jokes


ಬರೀ ತರ್ಲೆ ಅಲ್ಲ, ಸಿಕ್ಕಾಪಟ್ಟೆ ತರ್ಲೆ ಜೋಕ್ಸ್!


ಅಮೆರಿಕನ್ನರ ಜೀವನದ ಶೈಲಿ...
ಮಗಳು : ಸಾರಿ ಡ್ಯಾಡ್, ನನಗೆ ನಿನ್ನೆ ಮದುವೆ ಆಯಿತು. ನಿನಗೆ ಹೇಳಲು ಮರೆತು ಹೋಯಿತು. ಡೋಂಟ್ ಫೀಲ್ ಬ್ಯಾಡ್.
ತಂದೆ : ಇಟ್ಸ್ ಓಕೆ, ಬಟ್ ನೆಕ್ಸ್ಟ್ ಟೈಮ್ ಮಾತ್ರ ಮರೀ ಬೇಡ!

***

ಟೀಚರ್ : ವಿದ್ಯಾರ್ಥಿಗಳು ಒಳ್ಳೆ ಮನಸ್ಸಿನಿಂದ ಪ್ರಾರ್ಥನೆ ಮಾಡಿದರೆ ದೇವ್ರು ಯಾವ ವರ ಬೇಕಾದರೂ ಕೊಡ್ತಾನೆ.
ಗುಂಡ : ಅಯ್ಯೋ ಸುಮ್ನಿರಿ ಟೀಚರ್, ಅದು ನಿಜಾನೆ ಆಗಿದ್ರೆ ಇಷ್ಟೊತ್ತಿಗೆ ನೀವು ನನ್ನ ವೈಫ್ ಆಗಿರ್ತಿದ್ರಿ!

***

ಹುಡುಗಿರ ಲೈಫ್ ನೀರಿನ ತರಹ...
ಹುಡುಗರ ಲೈಫ್ ಮೊಬೈಲ್ ತರಹ...
ಮೊಬೈಲ್ ನೀರಿಗೆ ಬಿದ್ದರೂ ಅಥವಾ ನೀರು ಮೊಬೈಲ್ ಮೇಲೆ ಬಿದ್ದರೂ.. ಹಾಳಾಗುವುದು ಮೊಬೈಲ್ ಮಾತ್ರಾ!

***

ನಾಯಿಯೊಂದು ಬೆಕ್ಕನ್ನು ಅಗಾಧವಾಗಿ ಪ್ರೀತಿಸಲು ಆರಂಭಿಸಿತು..
ತನ್ನ ಪ್ರೀತಿಯ ವಿಷಯವನ್ನು ಮನೆಯವರ ಬಳಿ ತೋಡಿಕೊಂಡಿತು..
ನಾಯಿಯ ಮನೆಯವರು ಈ ಸಂಬಂಧವನ್ನು ನಿರಾಕರಿಸಿದರು..
ಏನಕ್ಕೆಂದರೆ.. ಛೆ.. ಹುಡುಗಿಗೆ ಮೀಸೆ ಇದೆ!

***

ಒಬ್ಬ ಹುಡುಗ ರಜನೀಕಾಂತ್ ಮನೆ ಮುಂದೆ ಕ್ರಿಕೆಟ್ ಆಡುತ್ತಿದ್ದ..
ಹುಡುಗ ಹೊಡೆದ ರಭಸಕ್ಕೆ ರಜನೀಕಾಂತ್ ಮನೆಯ ಕಿಟಕಿ ಒಡೆದು ಹೋಯಿತು..
ರಜನಿ ಬಾಲ್ ಹಿಡಿದು ಹುಡುಗನಿಗೆ ನಿಧಾನವಾಗಿ ಆಡು ಎಂದು ಉಪದೇಶಿಸಿದರು..
ಆ ಹುಡುಗ ಮತ್ಯಾರೂ ಅಲ್ಲ.. ರಾಹುಲ್ ದ್ರಾವಿಡ್!

No comments:

Post a Comment