ಸಂತಾ ಒಮ್ಮೆ ಅಂಗಡಿಗೆ ಹೋಗಿ ಹತ್ತಿಯ ಬಟ್ಟೆಯನ್ನು ತೆಗೆದು ಸಂತಾ: ಈ ಬಟ್ಟೆ ನೂರಕ್ಕೆ ನೂರು ಹತ್ತಿಯದ್ದಾ? ವ್ಯಾಪಾರಿ: ಇಲ್ಲ ಸರ್, ಅದರ ಗುಂಡಿಗಳು ಮಾತ್ರ ಪ್ಲಾಸ್ಟಿಕ್ನದ್ದು
ಟೀಚರ್: ಭೂಮಿಗೂ ಚಂದ್ರನಿಗೂ ಇರುವ ಸಂಬಂಧ ಏನು? ಗುಂಡ: ಅಣ್ಣ-ತಂಗಿ ಸಂಬಂಧ ಸಾರ್.. ಟೀಚರ್: ಹೇಗೆ...? ಗುಂಡ: ಏಕೆಂದರೆ ಭೂಮೀನ ನಾವು ತಾಯಿ ಅಂತೀವಿ.. ಚಂದ್ರನ್ನ ಮಾಮಾ ಅಂತೀವಿ.. ಅದಕ್ಕೆ ಸಾರ್..
ಸಂತಾ ಒಬ್ಬಳು ಸುಂದರಿ ಹುಡುಗಿ ಬರುತ್ತಿರುವುದನ್ನು ನೋಡಿ ಅವಳ ಹತ್ತಿರ ಹೋಗಿ ಅವಳ ಕೆನ್ನೆಗೆ ಒಂದು ಮುತ್ತು ಕೊಡುತ್ತಾನೆ. ಹುಡುಗಿ: ಹೇ... ನೀನೇನು ಮಾಡುತ್ತಿದ್ದೀಯಾ..? ಸಂತಾ: ನಾನು ಬಿಎ ಪೈನಲ್ ಇಯರ್...
ಪುಟ್ಟ: ನಿಮ್ಮ ಕಾರ್ ಹೆಸರೇನು? ಪುಟ್ಟಿ: ನಾನು ಅದರ ಹೆಸರು ಮರೆತುಬಿಟ್ಟೆ ಅದು 'ಟಿ'ಯಿಂದ ಶುರುವಾಗುತ್ತೆ. ಪುಟ್ಟ: ಅಬ್ಬಾ, ಎಂಥ ಗಾಡಿ ಮಾರಾಯ್ತಿ, ನಮ್ಮ ಗಾಡಿಗಳೆಲ್ಲಾ ಪೆಟ್ರೋಲ್ನಿಂದ ಶುರುವಾಗುತ್ತೆ
Sunday, April 17, 2011
Subscribe to:
Post Comments (Atom)
Contributors
Followers
Powered by Blogger.
0 comments:
Post a Comment